ಮಂಗಳೂರಲ್ಲಿ ಶುರುವಾಗಿರೋ ದರ್ಗಾ, ದೇಗುಲ ವಿವಾದ ತಾಂಬೂಲ ಪ್ರಶ್ನೆಯ ದಾರಿ ಹಿಡಿದಿತ್ತು. ಇದೀಗ ತಾಂಬೂಲ ಪ್ರಶ್ನೆ ಮುಗಿದಿದ್ದು, ದೈವಜ್ಞ ಗೋಪಾಲಕೃಷ್ಣ ಪಣಿಕ್ಕರ್ ಉತ್ತರ ನೀಡಿದ್ದಾರೆ.
ಅದು ದೈವಸಾನಿಧ್ಯವಿದ್ದ ಭೂಮಿ :
ಯಜಮಾನರು 9 ತಾಂಬೂಲಗಳನ್ನು ನೀಡಿದ್ದಾರೆ. ಈ ತಾಂಬೂಲಕ್ಕೆ ದೇವರ ದಯೆ ಇದೆ. ಏಳು ಆರೂಢದಲ್ಲಿ 4ಕ್ಕೆ ಗುರು ಬಲ ಇದೆ. ಮೂರು ಆರೂಢದಲ್ಲಿ ಗುರು ಬಲ ಇಲ್ಲ. ಮೇಲ್ನೋಟಕ್ಕೆ ದೇವಸ್ಥಾನವಿದ್ದ ಭೂಮಿ ಎಂದು ಗೊತ್ತಾಗಿದೆ. ಯಾವ ದೇವಸಾನಿಧ್ಯ ಅನ್ನೋದನ್ನು ಪತ್ತೆ ಹಚ್ಚುತ್ತೇವೆ ಎಂದು ದೈವಜ್ಞ ಗೋಪಾಲಕೃಷ್ಣ ಪಣಿಕ್ಕರ್ ಹೇಳಿದ್ದಾರೆ.

ಮಠ, ಆರಾಧನೆಯಾದ ಬಗ್ಗೆ ಕಂಡುಬರುತ್ತಿದೆ. ಸಾಮಾನ್ಯ ತಾಂಬೂಲ ಶಾಸ್ತ್ರ ಚಿಂತನೆ ಮೂಲಕ ಯಾವ ದೈವಸಾನಿಧ್ಯ ಎಂದು ಹೇಳಲು ಸಾಧ್ಯವಿಲ್ಲ. ದೇವಾಲಯ ಇತ್ತಾ ಅನ್ನೋದನ್ನು ಮುಂದೆ ಚಿಂತಿಸಬೇಕಿದೆ. ಮಠ, ಆರಾಧನೆಯಾದ ಬಗ್ಗೆ ಕಂಡುಬರುತ್ತಿದೆ. ಪೂರ್ಣ ಚೈತನ್ಯವಿರುವ ಹಾಗೇ ಲಕ್ಷಣ ಕಾಣುತ್ತಿದೆ. ಅದು ದೈವಸಾನಿಧ್ಯವಿದ್ದ ಭೂಮಿ. ಇದರಲ್ಲಿ ಯಾವುದೇ ಅನುಮಾನ ಇಲ್ಲ. ಸಾನಿಧ್ಯ ಸಂಪೂರ್ಣವಾಗಿ ನಾಶ ಆಗಿಲ್ಲ. ಸಾನಿಧ್ಯದ ಅರ್ಧ ಚಿಂತನೆ ಅಲ್ಲೇ ಇದೆ. ಪೂರ್ವ ಕಾಲದಲ್ಲಿ ಮಠದ ರೀತಿಯ ಪ್ರದೇಶ ಅದಾಗಿತ್ತು. ಮಠ ನಾಶಕ್ಕೆ ಜೀವ ಹಾನಿಯಾಗಿರೋದು ಕಾರಣವಾಗಿರಬಹುದು. ದೋಷಗಳಿಗೆ ಪರಿಹಾರ ಆಗಬೇಕಿದೆ ಎಂದು ತಾಂಬೂಲ ಪ್ರಶ್ನೆ ವೇಳೆ ದೈವಜ್ಞ ಗೋಪಾಲಕೃಷ್ಣ ಪಣಿಕ್ಕರ್ ಹೇಳಿದ್ದಾರೆ.
ದೇವರ ಬಲ ಇದೆ:
ಯಾವುದೋ ಒಂದು ಕಾಲದಲ್ಲಿ ನಾಶವಾದ ಭೂಮಿಗೆ ಈಗ ಅಭಿವೃದ್ಧಿ ಆಗುವ ಸಮಯ ಬಂದಿದೆ. ಯಾವುದೋ ವಿವಾದದಿಂದ ಭೂಮಿ ನಾಶವಾಗಿದೆ. ಸ್ಥಳ ಸಾನಿಧ್ಯ ವಿವಾದದ ಸಂದರ್ಭದಲ್ಲಿ ಕೆಲ ಶಕ್ತಿಗಳು ಬಿಟ್ಟುಹೋಗಿವೆ. ಆದರೆ ಆ ಜಾಗದಲ್ಲಿ ಇನ್ನೂ ಶಕ್ತಿಗಳು ಇವೆ. ಆ ಜಾಗದ ವಾರಸುದಾರರಿಗೂ ಜವಾಬ್ದಾರಿ ಇದೆ. ಅಲ್ಲಿ ಅಭಿವೃದ್ಧಿ ಆಗದಿದ್ದರೆ ಊರಿಗೇ ಸಮಸ್ಯೆ ಬರುತ್ತದೆ. ಎಲ್ಲರೂ ಒಗ್ಗಟ್ಟಾಗಿ ಮುಂದುವರಿಸಬೇಕಿದೆ. ಈತರಹದ ಚಿಂತನೆ ನನಗೆ ಅನುಭವ ಆಗಿರೋದೇ ಮೊದಲು. ಈ ಸಾನಿಧ್ಯಕ್ಕೆ ದೇವರ ಬಲ ಇದೆ ಎಂದು ಪಣಿಕ್ಕರ್ ನುಡಿದಿದ್ದಾರೆ.
ಲಿಂಗಾಯತ ಮಠಕ್ಕೆ ಸೇರಿರುವ ಜಾಗ:
ಇದೇ ಸಾನಿಧ್ಯಕ್ಕೆ ಸಂಬಂಧಪಟ್ಟ ಇನ್ನೊಂದು ಜಾಗ ಎತ್ತರದ ಪ್ರದೇಶದಲ್ಲಿದೆ. ಅಲ್ಲಿ ಹುಡುಕಿದರೆ ಸಾಕಷ್ಟು ಅವಶೇಷಗಳು ಸಿಗುವ ಸಾಧ್ಯತೆ ಇದೆ. ಹಿಂದೆ ಇದ್ದ ಕ್ಷೇತ್ರದ ಪೂರ್ಣ ಚೈತನ್ಯ ಅಲ್ಲೇ ಉಳಿದುಕೊಂಡಿದೆ. ಇದು ಹತ್ತಕ್ಕೂ ಅಧಿಕ ದೈವ-ದೇವರ ಸಮೂಹ ಆರಾಧನೆ ನಡೆಯುತ್ತಿದ್ದ ಜಾಗ. ಇದು ಒಂದು ಮಠಕ್ಕೆ ಸಂಬಂಧಿಸಿದ ಕ್ಷೇತ್ರವಾಗಿತ್ತು. ಯಾವುದೋ ಒಂದು ಕಾಲದಲ್ಲಿ ನಾಶವಾಗಿರಬಹುದು. ಆದರೆ ಈಗ ಅದರ ಪುನಶ್ಚೇತನಕ್ಕೆ ಕಾಲ ಕೂಡಿಬಂದಿದೆ. ಇದು ಎಲ್ಲ ಜಾತಿ ಮತದ ಶ್ರೇಯೋಭಿವೃದ್ಧಿಗೆ ಪ್ರಾರ್ಥಿಸುತ್ತಿದ್ದ ಜಾಗ. ಇದು ಲಿಂಗಾಯತ ಮಠಕ್ಕೆ ಸೇರಿರುವ ಜಾಗ ಎಂದು ಹೇಳಿದ್ದಾರೆ.