ಪುತ್ತೂರು: ಗ್ರಾಮಾಂತರ ಮಹಿಳಾ ಮೋರ್ಚಾದ ವತಿಯಿಂದ ಸೇವಾ ಪ್ರಾಕ್ಷಿಕ ಹಾಗೂ ಪ್ರಧಾನಿ ಮೋದಿ ರವರ ಜನ್ಮ ದಿನಾಚರಣೆಯ ಅಂಗವಾಗಿ ಆದರ್ಶ ಅಂಗನವಾಡಿ ಅಭಿಯಾನದಲ್ಲಿ ಕೇಪು ಗ್ರಾಮದ ಕುದ್ದುಪದವು ಅಂಗನವಾಡಿಯನ್ನು ಆದರ್ಶ ಅಂಗನವಾಡಿ ಎಂದು ಘೋಷಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕರಾದ ಸಂಜೀವ ಮಠಂದೂರು, ಮಹಿಳಾ ಮೋರ್ಚಾದ ಹಾಗೂ ಕೇಪು ಗ್ರಾಮದ ಅಧ್ಯಕ್ಷರಾದ ಯಶಸ್ವಿನಿ ಶಾಸ್ತ್ರಿ ನೆಕ್ಕರೆ,ಶಕ್ತಿ ಕೇಂದ್ರದ ಸಂಚಾಲಕರಾದ ರಾಧಾಕೃಷ್ಣಾ ಶೆಟ್ಟಿ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರಾದ ಹರಿಪ್ರಸಾದ್ ಯಾದವ್, ಹಿರಿಯ ರಾದ ಅಪ್ಪಯ್ಯ ಮನಿಯಾಣಿ, ಮಹಿಳಾ ಮೋರ್ಚಾದ ಪ್ರದಾನ ಕಾರ್ಯದರ್ಶಿ ಯಶೋಧ ಗೌಡ, ಮೋರ್ಚಾದ ಉಪಾಧ್ಯಕ್ಷರಾದ ಪ್ರಪುಲ್ಲ ಮೋರ್ಚಾದ ಕಾರ್ಯದರ್ಶಿ ಚಂದ್ರಕಲಾ ಪಂಚಾಯತ್ ಸದಸ್ಯ ರುಗಳಾದ ಜಗಜೀವನ್ ಶೆಟ್ಟಿ, ಪುರುಷೋತ್ತಮ್ ಗೌಡ, ದಮಯಂತಿ, ಜಯಶೀಲಾ, ನಿಕಟ ಪೂರ್ವ ಪಂಚಾಯತ್ ಅಧ್ಯಕ್ಷರಾದ ತಾರಾನಾಥ್ ಆಳ್ವ, ಹಿರಿಯರಾದ ರಾಮಚಂದ್ರ ಮನಿಯಾಣಿ, ಸೊಸೈಟಿ ಅಧ್ಯಕ್ಷ ರಾದ ಜನಾರ್ಧನ ಭಟ್, ಅಮೈ ಬೂತ್ ನ ಅಧ್ಯಕ್ಷರಾದ ಪುಷ್ಪಾಕರ ರೈ, ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ, ಹೆತ್ತವರು, ಮಕ್ಕಳು ಉಪಸ್ಥಿತರಿದ್ದರು.

ಈ ವೇಳೆ ವಿಶಿಷ್ಟ ಚೇತನಾ ಮಹಿಳೆ ಹರ್ಷಿತ ಇವರನ್ನು ಮೋರ್ಚಾ ವತಿಯಿಂದ ಗುರುತಿಸಲಾಯಿತು.



