ವಿಟ್ಲ: ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿ ಆಗಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗಿರುವ, ಸಹಸ್ರಾರು ಶಿಷ್ಯರನ್ನು ಹೊಂದಿರುವ ಶಿಕ್ಷಕಿ ಯಮುನ ರವರು ವಯೋಸಹಜ ಅಸೌಖ್ಯದಿಂದಾಗಿ ನಿಧನರಾದರು.
ಶಿಕ್ಷಕಿ ಯಮುನಾ ರವರು ನಿವೃತ್ತಿಯ ಬಳಿಕ ವಿಟ್ಲ ದೇವಾಡಿಗ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸಂಘದ ಏಳಿಗೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದರು.
ಮೃತರು ಓರ್ವ ಪುತ್ರ,ಇಬ್ಬರು ಪುತ್ರಿಯರನ್ನು, ಹಾಗೂ ಮೊಮ್ಮಕ್ಕಳು, ಕುಟುಂಬಸ್ಥರು ಮತ್ತು ಅಪಾರ ಶಿಷ್ಯವೃಂದವನ್ನು ಅಗಲಿದ್ದಾರೆ.