ಪುತ್ತೂರು : ಲಾರಿ ಡಿಕ್ಕಿ ಹೊಡೆದ ಪರಿಣಾಮ ಸರ್ಕಲ್ ಗೆ ಹಾನಿಯಾದ ಘಟನೆ ದರ್ಬೆ ಬೈಪಾಸ್ ಅಶ್ವಿನಿ ಬಾರ್ ಅಂಡ್ ರೆಸ್ಟೋರೆಂಟ್ ಬಳಿ ನಡೆದಿದೆ.

ದರ್ಬೆ ಬೈಪಾಸ್ ಜಂಕ್ಷನ್ ನಲ್ಲಿರುವ ಸರ್ಕಲ್ ಗೆ ನಿಯಂತ್ರಣ ತಪ್ಪಿ ಲಾರಿ ಡಿಕ್ಕಿ ಹೊಡೆದಿದ್ದು, ಸರ್ಕಲ್ ನ ಸುತ್ತ ಕಟ್ಟಿದ್ದ ಕಲ್ಲುಗಳು ಹುಡಿಯಾಗಿ ಸರ್ಕಲ್ ಗೆ ಹಾನಿ ಉಂಟಾಗಿದೆ.

ಘಟನೆಯಲ್ಲಿ ಚಾಲಕ ಅಪಾಯದಿಂದ ಪಾರಾಗಿದ್ದಾನೆ ಎಂದು ವರದಿಯಾಗಿದೆ..
