ಬಹು ನಿರೀಕ್ಷೆಯ ಬನ ಚಿತ್ರದ ಮೊದಲ ಎರಡು ಪ್ರೀಮಿಯರ್ ಮುಂಬೈನ ಮುಲುಂದ್ ಮತ್ತು ಕಲ್ಯಾಣ್ ನಲ್ಲಿ ನಡೆದಿದ್ದು ಅಲ್ಲಿನ ತುಳು ಪ್ರೇಕ್ಷಕರು ಚಿತ್ರದ ಬಗ್ಗೆ ಪ್ರಶಂಸೆಯ ಸುರಿಮಳೆಗೈದಿದ್ದಾರೆ.
ಯುವ ಕಲಾವಿದರು ಅದ್ಭುತವಾಗಿ ನಟಿಸಿದ್ದು ಚಿತ್ರದ ಕಥೆ ಎಲ್ಲರ ಗಮನ ಸೆಳೆದಿದೆ. ಇದು ಮೊದಲ ನಾಗ ಆಧಾರಿತ ತುಳುಚಿತ್ರವಾಗಿದ್ದು ಅದ್ಭುತವಾಗಿ ಮೂಡಿಬಂದಿದೆ. ಅಲ್ಲಿನ ಪ್ರೇಕ್ಷಕರ ಪ್ರಕಾರ ಚಿತ್ರವನ್ನು ಕಥೆ ಆವರಿಸಿಕೊಂಡಿದ್ದು ಹಿರಿಯ ಕಿರಿಯ ಕಲಾವಿದರು ತಮ್ಮ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಬಾಬಪ್ರಸಾದ್ ಅರಸ ಹಾಗೂ ನಾಗಕಿರಣ್ ಶೆಟ್ಟಿ ಮುಂಬಯಿ ನೇತೃತ್ವದಲ್ಲಿ ಮುಂಬೈ ಶೋ ಯಶಸ್ವಿಯಾಗಿ ನೆರವೇರಿದೆ. ಶನಿವಾರ ಶೋ ನಡೆದು ಹೌಸ್ಫುಲ್ ಪ್ರದರ್ಶನ ಗೊಂಡ ದಾಕಲೆ ಬನ ಚಿತ್ರದ್ದು.ಚಿತ್ರ ಇದೆ ತಿಂಗಳು 23 ಕ್ಕೆ ಬಿಡುಗಡೆಯಾಗಲಿದೆ.



























