ಪುತ್ತೂರು:2026ನೇ ಸಾಲಿನ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ ವೈಷ್ಣವಿ ನಾಟ್ಯಾಲಯದ ಭಾರ್ಗವಿ ಬಾಯರ್ ಅವರು ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆಯಾಗಿದ್ದಾರೆ.
ಮಂಗಳೂರಿನ ಶ್ರೀನಿವಾಸ್ ಯೂನಿವರ್ಸಿಟಿ ಇನ್ ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಕಾಲೇಜ್ನಲ್ಲಿ ಅಂತಿಮ ವರ್ಷದ ಬಿ.ಟೆಕ್ ವಿದ್ಯಾರ್ಥಿನಿಯಾಗಿದ್ದು, ಯಕ್ಷಗಾನ ಕಲಾವಿದೆಯೂ ಆಗಿರುವ ಈಕೆ ಯಕ್ಷಗಾನ ಕಲಾವಿದಬಾಯರ್ ಶಿವಪ್ಪ ಜೋಗಿ ಹಾಗೂ ಕುಸುಮ ದಂಪತಿ ಪುತ್ರಿ. ಈಕೆ ವೈಷ್ಣವೀ ನಾಟ್ಯಾಲಯ ಯೋಗೀಶ್ವರ ಅವರಲ್ಲಿ ಭರತನಾಟ್ಯ ತರಬೇತಿ ಪಡೆಯುತ್ತಿದ್ದಾರೆ.

























