ಪುತ್ತೂರು: ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ನೃತ್ಯ ಕಲೆಗಳ ವಿಶ್ವವಿದ್ಯಾಲಯ – ನಡೆಸಿದ ಕರ್ನಾಟಕ ಶಾಸ್ತ್ರೀಯ ಸಂಗೀತ ಅಂತಿಮ ವಿದ್ವತ್ ಪರೀಕ್ಷೆಯನ್ನು ಧನ್ಯಶ್ರೀ ಯವರು ಉತ್ತಮ ಅಂಕಗಳೊಂದಿಗೆ ಪೂರ್ಣಗೊಳಿಸಿರುತ್ತಾರೆ.
ಸಂಗೀತದ ಪ್ರಾರಂಭಿಕ ಹಂತದಿಂದಲೂ ಗುರುಗಳಾದ ವಿದ್ವಾನ್ ಕಾಂಚನ ಈಶ್ವರ ಭಟ್ರವರಲ್ಲಿ ಕಲಿಯುತ್ತಿರುವ ಇವರು ಉದಯ ಗೊವಿಂದಯ್ಯ ಮತ್ತು ವಸಂತ ಗೌರಿ ದಂಪತಿಯ ಪುತ್ರಿ. ಬಹುಮುಖ ಪ್ರತಿಭಾವಂತೆಯಾಗಿರುವ ಇವರು ಭರತನಾಟ್ಯದಲ್ಲಿ ವಿದ್ವತ್ ಪದವಿ ಹಾಗೂ ಪಿಟೀಲಿನಲ್ಲಿ ಸೀನಿಯರ್ ಪರೀಕ್ಷೆಯನ್ನು ಉತ್ತಮ ಅಂಕದೊಂದಿಗೆ ಪೂರೈಸಿರುತ್ತಾರೆ.
ಎಂಬಿಎ ಪದವೀಧರರಾದ ಇವರು ಪತಿ ಸಾಯಿ ಪ್ರಶಾಂತ್ ಕೋಟೆಯವರೊಂದಿಗೆ ಬೆಂಗಳೂರಿನಲ್ಲಿ ನೆಲೆಸಿ ಐಟಿ ಕಂಪೆನಿಯಲ್ಲಿ ವೃತ್ತಿನಿರತರಾಗಿದ್ದಾರೆ.


























