ಬಂಟ್ವಾಳ: ತಾಲೂಕಿನ ಮಣಿಹಳ್ಳ ಸಮೀಪ ನಡೆದ ರಸ್ತೆ ಅಪಘಾತದಲ್ಲಿ ಸ್ಕೂಟರ್ ಸವಾರ ಮೃತ ಪಟ್ಟ ಘಟನೆ ಸೆ. 3 ರಂದು ನಡೆದ ಬಗ್ಗೆ ವರದಿಯಾಗಿದೆ. ಬಂಟ್ವಾಳ ತಾಲೂಕಿನ ಮಣಿಹಳ್ಳ ಸಮೀಪದ ನಾವೂರ ನಿವಾಸಿ ಅಬ್ಬಾಸ್ (60) ಮೃತಪಟ್ಟ ಸ್ಕೂಟರ್ ಸವಾರ.
ಮಣಿಹಳ್ಳ ಸಮೀಪದ ನಾವೂರನಲ್ಲಿ ಜೀಪ್ ಮತ್ತು ಸ್ಕೂಟರ್ ನಡುವೆ ನಡೆದ ಅಪಘಾತದಲ್ಲಿ ಇವರು ಮೃತಪಟ್ಟಿದ್ದಾರೆ.
ನಾವೂರ ಮಸೀದಿ ಎದುರಿನಲ್ಲಿ ಜೀಪ್ ಮತ್ತು ಸ್ಕೂಟರ್ ನಡುವೆ ಅಪಘಾತ ಸಂಭವಿಸಿದ್ದೂ ಆಗ ಸ್ಕೂಟರ್ ಸವಾರ ಅಬ್ಬಾಸ್ ಗಂಭೀರ ಗಾಯಗೊಂಡರು. ಕೂಡಲೇ ಗಾಯಳುವನ್ನು ಆಸ್ಪತ್ರೆಗೆ ದಾಖಲಿಸಲಾಯಿತರಾದರೂ ಚಿಕಿತ್ಸೆ ಫಲಕಾರಿಯಾಗದೆ ಅಲ್ಲಿ ಅವರು ಮೃತ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಎಸ್.ಐ.ರಾಜೇಶ್ ಅವರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.