ನೆಲ್ಯಾಡಿ: ಕಡಬದ ಉದ್ದನೆಯ ತೂಗುಸೇತುವೆ ಬಳಿ ಬ್ಯಾಗ್, ಚಪ್ಪಲ್ಲಿ ಹಾಗೂ ಸೂಸೈಡ್ ನೋಟ್ ಇಟ್ಟು ನಾಪತ್ತೆಗೊಂಡಿರುವ ವ್ಯಕ್ತಿಗಾಗಿ ಗುಂಡ್ಯ ಮೊಳೆ ನದಿಯಲ್ಲಿ ಶೋಧ ಕಾರ್ಯ ಸೆ.19ರಂದು ಮುಂದುವರಿದಿದೆ. ಸೆ 18 ರಂದು ಬೆಳಿಗ್ಗೆ ಬೆಳಿಗ್ಗೆ 1 ಜೊತೆ ಪುರುಷರ ಚಪ್ಪಲ್ ಹಾಗೂ ಬ್ಯಾಗ್ ಇರುವುದನ್ನು ಗಮನಿಸಿದ ಗ್ರಾಮಸ್ಥರು ಈ ಬಗ್ಗೆ ನೆಲ್ಯಾಡಿ ಹೊರಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಂದಿನಿಂದ ಶೋಧ ಕಾರ್ಯ ನಡೆಯುತ್ತಿದೆ.
ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಪಟ್ಟಪರ್ತಿ ನಿವಾಸಿ ರಾಮಣ್ಣ(33ವೆ.) ನಾಪತ್ತೆಯಾಗಿರುವ ವ್ಯಕ್ತಿಯೆಂದು ಸ್ಥಳದಲ್ಲಿ ದೊರೆತ ಡೈವಿಂಗ್ ಲೈಸನಿಂದ ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ರಾಮಣ್ಯರವರ ತಂದೆ ಎಂ.ಸುಬ್ರಹ್ಮಣ್ಯಂ ಹಾಗೂ ಅವರ ಕುಟುಂಬಸದಸ್ಯರು ಪುಟ್ಟಪರ್ತಿಯಿಂದ ಆಗಮಿಸಿ ಶೋಧ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಸ್ಥಳದಲ್ಲಿ ಪತ್ತೆಯಾಧ ಬ್ಯಾಗ್‌ನಲ್ಲಿ ಸೆ.15ರಂದು ಧರ್ಮಸ್ಥಳದಿಂದ ಉದನೆಗೆ ಪ್ರಯಾಣಿಸಿರುವ ಬಸ್ ಟಿಕೆಟ್, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬರೆದಿರುವ ಪತ್ರ ಪತ್ತೆಯಾಗಿತ್ತು. ಹಾಗಾಗಿ ವ್ಯಕ್ತಿಯೂ ಗುಂಡ್ಯ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆ೦ಬ ಶಂಕೆಯಲ್ಲಿ ಸೆ.18ರಂದು ಹಾಗೂ ಸೆ 19 ರಂದು ಅಗ್ನಿಶಾಮಕ ದಳದ ಸಿಬ್ಬಂದಿಗಳು ಗುಂಡ್ಯ ಮೊಳೆ ನೀರಿನಲ್ಲಿ ಹುಡುಕಾಟ ನಡೆಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿಗಳ ಹುಟುಕಾಟಕ್ಕೆ ಉಜಿರೆ, ನೆಲ್ಯಾಡಿಯ ನುರಿತ ಈಜುಗಾರರು ಸಾಥ್ ನೀಡಿದ್ದರು.