ಪುತ್ತೂರು: ಮನೆಯಂಗಳದಿಂದಲೇ ಅಡಿಕೆ ಕಳವು ಮಾಡಿದ ಪ್ರಕರಣ ಕೆದಿಲದಲ್ಲಿ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ನಗರ ಠಾಣಾ ಪೊಲೀಸರು ಆರೋಪಿಯನ್ನು 24 ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಕೆದಿಲ ಬಡೆಕ್ಕಿಲ ನಿವಾಸಿ ಗಣೇಶ್ ಎಂದು ಗುರುತಿಸಲಾಗಿದೆ. ಕೆದಿಲ ಅಬ್ದುಲ್ಲಾ ಎಂಬವರ ಮನೆಯಂಗಳ ಮತ್ತು ತೋಟದಿಂದ ಅಡಿಕೆ ಕಳವಾದ ಕುರಿತು ಅ.3ರಂದು ಬೆಳಕಿಗೆ ಬಂದಿದ್ದು, ಅವರು ಪೊಲೀಸರಿಗೆ ದೂರು ನೀಡಿದ್ದರು.
ತಕ್ಷಣ ಕಾರ್ಯಪ್ರವೃತರಾದ ಪೊಲೀಸರು ಅಡಿಕೆ ಕಳ್ಳ ಅಡಿಕೆಯನ್ನು ಕಬಕದಲ್ಲಿ ಮಾರಾಟ ಮಾಡುತ್ತಿದ್ದ ವೇಳೆ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಅ.4ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ತಿಳಿದು ಬಂದಿದೆ.