ಪುತ್ತೂರು: ಸಾಲ್ಮರ ಸೈಯದ್ ಮಲೆ ಜುಮಾ ಮಸೀದಿಯ ಅಧ್ಯಕ್ಷರಾಗಿ ನ್ಯಾಯವಾದಿ ನೂರುದ್ದೀನ್ ಸಾಲ್ಮರ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಜುನೈದ್ ಸಾಲ್ಮರ ಪುನರಾಯ್ಕೆಗೊಂಡರು.
ಸೈಯದ್ ಮಲೆ ಜಮಾ ಮಸೀದಿ ವಠಾರದಲ್ಲಿರುವ ಮಿಸ್ಬಾ ಹುಲ್ ಹುದಾ ಮದರಸ ಸಭಾಂಗಣದಲ್ಲಿ ಮಾ.11 ರಂದು ನಡೆದ ಮಹಾಸಭೆಯಲ್ಲಿ ಆಯ್ಕೆ ಮಾಡಲಾಯಿತು.
ಅಲ್ ಹಾಜ್ ಸೈಯದ್ ಮೊಹಮ್ಮದ್ ತಂಙಳ್ ಸಾಲ್ಮರ ದುವಾ ಮಾಡಿದರು. ಮಹಾಸಭೆಯ ಅಧ್ಯಕ್ಷತೆಯನ್ನು ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷರಾದ ಎಲ್ ಟಿ ಅಬ್ದುಲ್ ರಝಾಕ್ ಹಾಜಿ ವಹಿಸಿದ್ದರು. ಸೈಯದ್ ಮಲೆ ಜುಮಾ ಮಸೀದಿಯ ಖತೀಬ್ ಹಾಜಿ ಉಮ್ಮರ್ ದಾರಿಮಿ ಮುಖ್ಯ ಪ್ರಭಾಷಣ ಮಾಡಿದರು.
ಅನ್ಸಾರುದ್ದೀನ್ ಜಮಾಅತ್ ಕಮಿಟಿ ಪ್ರಧಾನ ಕಾರ್ಯದರ್ಶಿ ಯಾಕೂಬ್ ಖಾನ್, ಕೋಶಾಧಿಕಾರಿ ಇಸ್ಮಾಯಿಲ್ ಸಾಲ್ಮರ ವೀಕ್ಷಕರಾಗಿ ಆಗಮಿಸಿದ್ದರು. ಉಪಾಧ್ಯಕ್ಷ ಕೆ.ಎಂ ಅಬ್ದುಲ್ಲಾ ಕೂರ್ನಡ್ಕ, ಸದಸ್ಯ ಶೇಖ್ ಜೈನುದ್ದಿನ್ ಉಪಸ್ಥಿತರಿದ್ದರು. ಸೈಯದ್ ಮಲೆ ಜುಮಾ ಮಸೀದಿಯ ಮಾಜಿ ಅಧ್ಯಕ್ಷ ಹಾಜಿ ಯು ಅಬ್ದುಲ್ಲಾ, ಸುಲೈಮಾನ್ ಹಾಜಿ ಸಾಲ್ಮರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸೈಯದ್ ಮೇಲೆ ಜುಮಾ ಮಸೀದಿಯ ಜೊತೆ ಕಾರ್ಯದರ್ಶಿ ಯೂಸುಫ್ ತಾರಿಗುಡ್ಡೆ ಸ್ವಾಗತಿಸಿ, ಸದಸ್ಯ ಅಬ್ದುಲ್ ಹಮೀದ್ ಸಾಲ್ಮರ ವಂದಿಸಿದರು.
ನೂತನ ಸಮಿತಿ
- ಅಧ್ಯಕ್ಷರಾಗಿ ನ್ಯಾಯವಾದಿ ನೂರುದ್ದೀನ್ ಸಾಲ್ಮರ
- ಉಪಾಧ್ಯಕ್ಷರುಗಳಾಗಿ ಇಸ್ಮಾಯಿಲ್ ಸಾಲ್ಮರ ಮತ್ತು ಸಾಲ್ಮರ ಮೊಹಮ್ಮದ್ ಶರೀಫ್
- ಪ್ರಧಾನ ಕಾರ್ಯದರ್ಶಿ ಜುನೈದ್ ಸಾಲ್ಮರ
- ಜೊತೆ ಕಾರ್ಯದರ್ಶಿಗಳಾಗಿ ಯೂಸುಫ್ ತಾರಿಗುಡ್ಡೆ ಮತ್ತು ಹಸನ್ ಮುದ್ದೋಡಿ
- ಕೋಶಾಧಿಕಾರಿ ಮೊಹಮ್ಮದ್ ಕೋಲ್ಪೆ
- ಸದಸ್ಯರುಗಳಾಗಿ ಅಬ್ದುಲ್ ಹಮೀದ್ ಸಾಲ್ಮರ, ಲತೀಫ್ ಸಾಲ್ಮರ, ಅಬ್ದುಲ್ ರಜಾಕ್ ತಾರಿಗುಡ್ಡೆ, ಕಬೀರ್ ಸಾಲ್ಮರ, ಅಜೀಜ್ ಸುಪಾರಿ, ಉಮ್ಮರ್ ಕಟ್ಲೇರಿ, ಹಂಸತ್ ಸಾಲ್ಮರ, ಬಾಯಾರು ಪುತ್ತು ಹಾಜಿ, ಉಮ್ಮರ್ ಹಾಜಿ ಕೆರೆಮೂಲೆ ಮತ್ತು ಡಾಕ್ಟರ್ ರಿಯಾಜ್ ಆಯ್ಕೆಯಾದರು.