ಸುಳ್ಯ: ಮಾಣಿ – ಮೈಸೂರು ರಾಷ್ಟೀಯ ಹೆದ್ದಾರಿಯ ಸಂಪಾಜೆ ಗಡಿಕಲ್ಲು ಬಳಿ ಎದುರಿನ ಚಕ್ರ ಸ್ಫೋಟಗೊಂಡು ಸರಕಾರಿ ಬಸ್ಸೊಂದು ರಸ್ತೆ ಬದಿಯ ಹೊಳೆಗೆ ಉರುಳಿದ ಪರಿಣಾಮ ಬಸ್ಸಲ್ಲಿದ್ದ ನಾಲ್ವರು ಗಂಭೀರವಾಗಿ ಗಾಯಗೊಂಡು 30ಕ್ಕೂ ಹೆಚ್ಚು ಮಂದಿ ಸಣ್ಣಪುಟ್ಟ ಗಾಯಗೊಂಡ ಘಟನೆ ಮಾ.17ರಂದು ನಡೆದಿದೆ.
ಧರ್ಮಸ್ಥಳದಿಂದ – ಗುಂಡ್ಲುಪೇಟೆಗೆ ತೆರಳುತ್ತಿದ್ದ ಬಸ್ ಸಂಪಾಜೆಯ ಗಡಿಕಲ್ಲು ಎಂಬಲ್ಲಿ ಟಯರ್ ಸ್ಪೋಟಗೊಂಡು ರಸ್ತೆಯಿಂದ ಹೊಳೆಗೆ ಬಸ್ ಪಲ್ಟಿಯಾಗಿದೆ.
ಘಟನೆಯಲ್ಲಿ ಚಾಲಕ ಸೇರಿದಂತೆ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಉಳಿದ ಪ್ರಯಾಣಿಕರಿಗೂ ಗಾಯಗಳಾಗಿವೆ.ಗಾಯಾಳುಗಳನ್ನು ಸುಳ್ಯದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.