ವಿಟ್ಲ: ಕಾರು ಮತ್ತು ಬಸ್ ನಡುವೆ ಅಪಘಾತ ಸಂಭವಿಸಿದ ಘಟನೆ ಕೋಡಂಗಾಯಿ ರಾಧುಕಟ್ಟೆ ಎಂಬಲ್ಲಿ ಮಾ.30 ರಂದು ಸಂಜೆ ನಡೆದಿದೆ.
ವಿಟ್ಲ ಕಡೆ ಆಗಮಿಸುತ್ತಿದ್ದ ಬಸ್ ಮತ್ತು ವಿಟ್ಲ ಕಡೆಯಿಂದ ತೆರಳುತ್ತಿದ್ದ ಕಾರ್ ನಡುವೆ ಅಪಘಾತ ಸಂಭವಿಸಿದೆ.
ಅಪಘಾತದಿಂದಾಗಿ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾವಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.