ಪುತ್ತೂರು: ಸುಳ್ಯಪದವಿನಲ್ಲಿ ಹಿಂದೂ ಜಾಗರಣ ವೇದಿಕೆಯ ನೂತನ ಘಟಕ ರಚನೆ ಮಾಡಲಾಗಿದ್ದು, ಗೌರವಾಧ್ಯಕ್ಷರಾಗಿ ವಾಮನ ಮೂಲ್ಯ, ಅಧ್ಯಕ್ಷರಾಗಿ ಹರೀಶ್ಚಂದ್ರ ಕನ್ನಡ್ಕ ರವರು ಆಯ್ಕೆಯಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿಯಾಗಿ ಸುಧೀರ್ ಶಬರಿನಗರ ರವರು ಆಯ್ಕೆಯಾಗಿದ್ದು, ನೂತನವಾಗಿ ಹಲವು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ವಿಭಾಗ ಕಾರ್ಯದರ್ಶಿ ಚಿನ್ಮಯ್ ಈಶ್ವರಮಂಗಲ, ಜಿಲ್ಲಾ ಮಾತೃ ಸುರಕ್ಷಾ ಸಂಯೋಜಕ್ ರಾಜೇಶ್ ಪಂಚೋಡಿ, ತಾಲೂಕು ಕಾರ್ಯದರ್ಶಿ ಪುಷ್ಪರಾಜ್, ಸ್ವಸ್ತಿಕ್ ಸರ್ವೇ ಹಾಗೂ ಮತ್ತಿತರರು ಉಪಸ್ಥಿತರಿದ್ದರು.