ಉಡುಪಿ: ಶಾಲಾ- ಕಾಲೇಜುಗಳಿಗೆ ಹಿಜಾಬ್ (Hijab) ಧರಿಸದಂತೆ ಈಗಾಗಲೇ ಹೈಕೋರ್ಟ್ ತೀರ್ಪು ನೀಡಿದೆ. ಶಿಕ್ಷಣ ಇಲಾಖೆ ಕೂಡಾ ಹಿಜಾಬ್ ಧರಿಸಿ ಬರುವ ವಿದ್ಯಾರ್ಥಿನಿಯರಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲ್ಲ ಅಂತ ತಿಳಿಸಿದೆ. ಹೀಗಿದ್ದೂ, ನಿನ್ನೆ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದರು. ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಿ ಅಂತ ಮನವಿ ಮಾಡಿದ್ದರು. ಆದರೆ ಅವಕಾಶ ಸಿಗದೆ ಹಿನ್ನೆಲೆ ಪರೀಕ್ಷೆ ಬರೆಯದೇ ವಾಪಸ್ ಆಗಿದ್ದರು. ಇಂದು ಕೂಡಾ ಹಿಜಾಬ್ ಹಕ್ಕಿಗಾಗಿ ಹೈಕೋರ್ಟ್ ಕೋರ್ಟ್ ಮೆಟ್ಟಿಲೇರಿದ್ದ ಮೂವರು ವಿದ್ಯಾರ್ಥಿನಿಯರು ಪರೀಕ್ಷೆಗೆ ಗೈರಾಗಿದ್ದಾರೆ.
ಇಂದು ಗಣಿತ ಪರೀಕ್ಷೆ ನಡೆಯುತ್ತಿದೆ. ಆದರೆ ಹಿಜಾಬ್ ಹಕ್ಕಿಗಾಗಿ ಹೋರಾಟ ಮಾಡುತ್ತಿರುವ ವಿದ್ಯಾರ್ಥಿನಿಯರು ಪರೀಕ್ಷೆ ಬರೆಯಲು ಬಂದಿಲ್ಲ. ಅಲ್ಮಾಸ್, ಹಜ್ರಾ, ಆಯೇಷಾ ಪರೀಕ್ಷೆಗೆ ಗೈರಾಗಿದ್ದಾರೆ. ಅಲ್ಮಾಸ್ ಹಾಲ್ ಟಿಕೆಟ್ ಪಡೆದು ಪರೀಕ್ಷೆಗೆ ಗೈರಾಗಿದ್ದಾರೆ. ಇನ್ನು ಹಜ್ರಾ, ಆಯೇಷಾ ಹಾಲ್ ಟಿಕೆಟ್ ಪಡೆಯುವುದಕ್ಕೂ ಬಂದಿಲ್ಲ.
ನಿನ್ನೆ ಹಿಜಾಬ್ ಧರಿಸಿ ಬಂದಿದ್ದಕ್ಕೆ ಅಲಿಯಾ, ರೇಷಂಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಿಲ್ಲ. ಈ ಇಬ್ಬರು ವಿದ್ಯಾರ್ಥಿನಿಯರು ಭಾರಿ ಟೀಕೆಗೆ ಒಳಗಾಗಿದ್ದಾರೆ. ಹೀಗಾಗಿ ತಾವು ಕೂಡ ಪರೀಕ್ಷಾ ಕೇಂದ್ರಕ್ಕೆ ಹೋದರೆ ಟೀಕೆಗೆ ಒಳಗಾಗಬಹುದೆಂಬ ಭೀತಿಯಿಂದ ಗೈರಾಗಿದ್ದಾರಾ ಎಂಬ ಅನುಮಾನ ಮೂಡಿದೆ.