ವಿಟ್ಲ: ಕನ್ಯಾನ ಗ್ರಾಮದ ಕಣಿಯೂರು ಎಂಬಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಎಸ್.ಎಸ್.ಎಲ್. ಸಿ. ವಿದ್ಯಾರ್ಥಿನಿ ಮನೆಗೆ ದಲಿತ್ ಸೇವಾ ಸಮಿತಿ ನೇತೃತ್ವದ ನಿಯೋಗ ಭೇಟಿ ನೀಡಿದೆ.
ಬಾಲಕಿಯ ಮನೆಗೆ ಭೇಟಿ ನೀಡಿದ ದಲಿತ್ ಸೇವಾ ಸಮಿತಿ ಮುಖಂಡರು ಸಾಂತ್ವನವನ್ನು ಹೇಳಿ ನಿಮ್ಮೊಂದಿಗೆ ನ್ಯಾಯ ಒದಗಿಸಲು ಸಂಘಟನೆ ಬದ್ದವಾಗಿದೆ ಎಂದು ಭರವಸೆ ನೀಡಿದರು.

ಬಾಲಕಿಯದ್ದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದರ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಈಗಾಗಲೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಸಾಹುಲ್ ಹಮೀದ್ ನನ್ನು ಕೂಡಲೇ ಬಂಧಿಸದಿದ್ದಲ್ಲಿ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಚಂದ್ರಶೇಖರ್ ಯು ವಿಟ್ಲ, ವಿಮಲಾ ಮುಳಿಯ, ಗಣೇಶ್ ಸೀಗೆಬಲ್ಲೆ, ವಿಮಲಾ ಸೀಗೆಬಲ್ಲೆ, ರಾಜೇಶ್ ಪೆರ್ನೆ ಮತ್ತು ಶ್ರೀದೇವಿ ಮಜಿ ಉಪಸ್ಥಿತರಿದ್ದರು.