ವಿಟ್ಲ: ಸಂಸ್ಕಾರ ಭಾರತಿ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕು ಘಟಕ ಹಾಗೂ ಶ್ರೀಸ್ಕಂದ ಬಾಲ ಕಲಾವೃಂದ ಅಳಿಕೆ ಇದರ ಸಂಯುಕ್ತ ಆಶ್ರಯದಲ್ಲಿ ಅಳಿಕೆ ಯುವಕ ಮಂಡಲ, ನವಚೇತನ ಯುವತಿ ಮಂಡಲ ಚೆಂಡುಕಳ ,ಯಕ್ಷ ಪೋಷಕರು ಅಳಿಕೆ ಇವರ ಸಹಯೋಗದೊಂದಿಗೆ ಸಂಸ್ಕಾರ ಸೌರಭ ಮಕ್ಕಳ ಮೂರು ದಿನದ ಬೇಸಿಗೆ ರಜಾ ಹಬ್ಬ ಶಿಬಿರವು ಅಳಿಕೆ ಗ್ರಾಮದ ಚೆಂಡು ಕಳ ಯುವಕ ಮಂಡಲದ ಸಭಾ ಭವನದಲ್ಲಿ ಮಕ್ಕಳಿಂದ ದೀಪ ಬೆಳಗಿಸಿ ,ಗಿಡಕ್ಕೆ ನೀರು ಹಾಕಿ, ಭಾರತ ಮಾತೆಗೆ ಪುಷ್ಪಾರ್ಚನೆ ಸಲ್ಲಿಸುವುದರ ಮೂಲಕ ಉದ್ಘಾಟನೆಗೊಂಡಿತು.

ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಕಾರ ಭಾರತೀ ದ.ಕ.ಜಿಲ್ಲೆಯ ಕೋಶಾಧಿಕಾರಿ ಸಂಕಪ್ಪ ಶೆಟ್ಟಿ ಯವರು ವಹಿಸಿದ್ದರು. ವೇದಿಕೆಯಲ್ಲಿ ಸಂಸ್ಕಾರ ಭಾರತಿ ಬಂಟ್ವಾಳ ತಾಲೂಕು ಇದರ ಅಧ್ಯಕ್ಷರಾದ ಮಂಜು ವಿಟ್ಲ, ನಿವೃತ್ತ ಪ್ರಾಧ್ಯಾಪಕರಾದ ಪೂವಪ್ಪ ಶೆಟ್ಟಿ ಅಳಿಕೆ , ಶ್ರೀಧರ್ ಅಳಿಕೆ , ಮುಖ್ಯಗುರುಗಳಾದ ಈಶ್ವರ ನಾಯ್ಕ ಪ್ರಾಧ್ಯಾಪಕರಾದ ಯಾದವ ನಡುಗುತ್ತು, ಅಳಿಕೆ ವ್ಯವಸಾಯ ಸೇವಾ ಸಹಕಾರಿಯ ಅಧ್ಯಕ್ಷರಾದ ಕಾನ ಈಶ್ವರ ಭಟ್, ಗ್ರಾಮ ಪಂಚಾಯತ್ ಸದಸ್ಯರಾದ ಪದ್ಮನಾಭ ಪೂಜಾರಿ ಸಣ್ಣ ಗುತ್ತು, ಕುಣಿತ ಭಜನೆ ತರಬೇತು ದಾರರಾದ ಯೋಗೀಶ್ ನರಿಕೊಂಬು ,ಯೋಗ ತರಬೇತುದಾರರಾದ ನಳಿನಾಕ್ಷಿ ಆಚಾರ್ಯ ಮಾಣಿಲ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಶಿಬಿರಾರ್ಥಿಗಳಿಗೆ ಅರಶಿನ ಕುಂಕುಮ ಹೂ ಮತ್ತು ಸಿಹಿ ನೀಡುವುದರ ಮೂಲಕ ಸ್ವಾಗತಿಸಲಾಯಿತು. ಶಿಬಿರಾರ್ಥಿ ಮನ್ವಿತ್ ರವರು ಸ್ವಾಗತಿಸಿದರು. ಸಿಂಚನ ಅಳಿಕೆ ಶಿಬಿರಧ್ಯೇಯಗೀತೆ ಹಾಡಿದರು, ಶಿಬಿರಾರ್ಥಿ ಕೀರ್ತನ ವಂದನಾರ್ಪಣೆಗೈದರು. ಶಿಬಿರಾರ್ಥಿ ತೃಶಾಲಿ ಕಾರ್ಯಕ್ರಮ ನಿರೂಪಿಸಿದರು.

ಶಿಬಿರದ ಸಂಯೋಜಕರಾದ ಸದಾಶಿವ ಅಳಿಕೆ, ನಿರ್ವಾಹಕರಾದ ಲೀಲಾವತಿ ರಾಮಗೌಡ, ಅಮಿತ ಸಂಜೀವ, ರಜನಿ ಹರೀಶ್ ಶೆಟ್ಟಿ, ಕಾವ್ಯಶ್ರೀ,ಮಕ್ಕಳ ಪೋಷಕರು ಉಪಸ್ಥಿತರಿದ್ದು ಸಹಕರಿಸಿದರು. ಸುಮಾರು 70 ಮಕ್ಕಳು ಶಿಬಿರದಲ್ಲಿ ಭಾಗವಹಿಸಿದ್ದರು.
