ಬಂಟ್ವಾಳ: ದ್ವಿಚಕ್ರ ವಾಹನ ಡಿಕ್ಕಿಯಾಗಿ ಪಾದಾಚಾರಿ ಸಾವನ್ನಪ್ಪಿದ ಘಟನೆ ಮೆಲ್ಕಾರ್ ಟ್ರಾಫಿಕ್ ಪೊಲೀಸ್ ಠಾಣಾ ವ್ಯಾಪ್ತಿಯ ಬೇಂಕ್ಯ ಎಂಬಲ್ಲಿ ನಡೆದಿದೆ.
ಸಜೀಪ ಮೂಡ ಗ್ರಾಮದ ಬೇಂಕ್ಯ ಸುಭಾಶ್ ನಗರ ನಿವಾಸಿ ಸುನಿಲ್ ಕುಮಾರ್ (46) ಮೃತ ದುರ್ದೈವಿ.
ಸುನಿಲ್ ಕುಮಾರ್ ಅವರು ಎಲೆಕ್ಟ್ರಿಕ್ ಉದ್ಯೋಗಿಯಾಗಿದ್ದು ಕೆಲಸ ಮುಗಿಸಿ ಮನೆ ಕಡೆಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಸ್ಥಳೀಯ ನಿವಾಸಿ ಸ್ನೇಹಿತನ ಸ್ಕೂಟರ್ ಡಿಕ್ಕಿಯಾದ ಪರಿಣಾಮ ಸುನಿಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಎಸ್.ಐ.ಮೂರ್ತಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.