ಬಂಟ್ವಾಳ: ಫರಂಗಿಪೇಟೆಯ ಕಾಂತಪ್ಪ ಪೂಂಜ ಸಂಕೀರ್ಣ ಎದುರು ನಿಂತಿದ್ದ ಎರಡು ಕಾರುಗಳಿಗೆ ವೋಕ್ಸ್ ವೆಗಾನ್ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂರು ಕಾರುಗಳು ಕೂಡ ಜಖಂಗೊಂಡಿದೆ.
ಬಿ.ಸಿ.ರೋಡು ಕಡೆಯಿಂದ ಅತಿ ವೇಗದಲ್ಲಿ ಬಂದ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಫರಂಗಿಪೇಟೆಯಲ್ಲಿ ಹೆದ್ದಾರಿ ಬದಿ ನಿಲ್ಲಿಸಿದ್ದ ಮಾರುತಿ ಓಮ್ನಿ ಮತ್ತು ಮಾರುತಿ ಆಲ್ಟೊ ಕಾರಿಗೆ ಡಿಕ್ಕಿಯಾಗಿದ್ದು, ಅದರಲ್ಲಿ ಒಂದು ಕಾರು ರಿಪೇರಿಗೆ ನಿಲ್ಲಿಸಿದ್ದ ಟಿಪ್ಪರ್ ಗೆ ಡಿಕ್ಕಿಯಾಗಿದೆ. ಓಮ್ನಿ ಮತ್ತು ಟಿಪ್ಪರ್ ನಡುವೆ ಸಿಲಿಕಿದ ಮಾರುತಿ ಆಲ್ಟೊ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ.
ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.