ವಿಟ್ಲ: ಮಹತೋಭಾರ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಕಾಲಾವಧಿ ಜಾತ್ರೆಯ ಧ್ವಜಾರೋಹಣ ನೆರವೇರಿತು.
ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಕೆರೆಯ ಪಕ್ಕದಲ್ಲಿ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಕ್ ವತಿಯಿಂದ ನಿರ್ಮಿಸಲಾದ ಹೂತೋಟವನ್ನು ವಿಟ್ಲ ಅರಮನೆಯ ಅರಸರಾದ ಬಂಗಾರು ಅರಸರು ಲೋಕಾರ್ಪಣೆ ಗೊಳಿಸಿದರು.
ಈ ಸಂದರ್ಭದಲ್ಲಿ ವಿಟ್ಲ ಅರಮನೆಯ ಸದಾಶಿವ ಕೆ, ಕೃಷ್ಣಯ್ಯ ಕೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಲ್ ಎನ್ ಕೂಡೂರು, ಗ್ರಾಮೀಣ ಬ್ಯಾಂಕಿನ ಆಡಳಿತ ಮಂಡಳಿ ಅಧ್ಯಕ್ಷ ಜಗನ್ನಾಥ ಸಾಲಿಯಾನ್, ಉಪಾಧ್ಯಕ್ಷ ಮೋಹನ್ ಭಟ್, ಸಿ ಇ ಒ ಕೃಷ್ಣ ಮುರಳಿ ಶ್ಯಾಂ, ಆಡಳಿತ ಮಂಡಳಿ ಸದಸ್ಯರು, ಮತ್ತಿತರರು ಉಪಸ್ಥಿತರಿದ್ದರು.
ಮಕರ ಸಂಕ್ರಮಣ ದಿನವಾದ ಇಂದು ಜಾತ್ರೋತ್ಸವದ ಧ್ವಜಾರೋಹಣಗೊಂಡು, ಇಂದಿನಿಂದ ಎಂಟು ದಿನಗಳ ಕಾಲ ವಿವಿಧ ಧಾರ್ಮಿಕ ವಿಧಿವಿಧಾನಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಅದ್ದೂರಿಯಾಗಿ ಜಾತ್ರೋತ್ಸವ ನಡೆಯಲಿದೆ..