ವಿಟ್ಲ: ಸಹಕಾರ ಮನೋಭಾವದಿಂದ ಕೆಲಸ ಮಾಡಿದಾಗ ಸಂಸ್ಥೆಯ ಜತೆಗೆ ವ್ಯಕ್ತಿಗೂ ಹೆಸರು ಬರುತ್ತದೆ. ಮೋಹನ್ ರಾವ್ ಅವರು ಕಷ್ಟದ ದಿನದಲ್ಲಿ ಬ್ಯಾಂಕ್ ನ ಜತೆಗೆ ಕೆಲಸ ನಿರ್ವಹಿಸಿಕೊಂಡು ಬಂದಿದ್ದಾರೆ ಎಂದು ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿಯಮಿತ ಅಧ್ಯಕ್ಷ ಜಗನ್ನಾಥ ಸಾಲಿಯಾನ್ ಎಚ್. ಹೇಳಿದರು.
ಅವರು ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿಯಮಿತದ ಪ್ರಧಾನ ಕಛೇರಿಯಲ್ಲಿ ವಯೋನಿವೃತ್ತಿ ಹೊಂದಿದ ಮೋಹನ್ ರಾವ್ ವಿ. ಅವರ ಬೀಳ್ಕೊಡುಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮವನ್ನು ಹಿರಿಯ ಸದಸ್ಯರಾದ ಜಗನ್ನಾಥ ಕಾಸರಗೋಡು, ಬಾಬು ಕೆ. ವಿ., ಸುಬ್ಬಣ್ಣ ಭಟ್ ಕಾಂತಿಲ ಉದ್ಘಾಟಿಸಿದರು. ಸುಮಾರು ೩೫ ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಮೋಹನ್ ರಾವ್ ವಿ. ದಂಪತಿಗಳವರನ್ನು ಬ್ಯಾಂಕ್ ವತಿಯಿಂದ ಸನ್ಮಾನಿಸಲಾಯಿತು.
ಆಡಳಿತ ಮಂಡಳಿ ಸದಸ್ಯರಾದ ಹರೀಶ್ ನಾಯಕ್ ಎಂ., ಮನೋರಂಜನ್ ಕೆ. ಆರ್., ಉದಯಕುಮಾರ್ ಎ., ಕೃಷ್ಣ ಕೆ., ದಿವಾಕರ ವಿ., ದಯಾನಂದ ಆಳ್ವ, ಸುಂದರ ಡಿ., ಗೋವರ್ಧನ್ ಕುಮಾರ್, ಬಾಲಕೃಷ್ಣ ಪಿ. ಎಸ್., ಜಯಂತಿ ಎಚ್., ಶುಭಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು.
ಮುಖ್ಯಕಾರ್ಯ ನಿರ್ವಾಹಕ ಕೃಷ್ಣ ಮುರಳಿ ಶ್ಯಾಮ್ ಕೆ. ಸ್ವಾಗತಿಸಿದರು. ಉಪಾಧ್ಯಕ್ಷ ಕೆ. ಎಸ್. ಮೋಹನ್ ಪ್ರಸ್ತಾವನೆಗೈದರು. ಆಡಳಿತ ಮಂಡಳಿ ಸದಸ್ಯ ವಿಶ್ವನಾಥ ಎಂ. ವಂದಿಸಿದರು. ಮಹೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.