ಬಂಟ್ವಾಳ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್( ರಿ) ದ.ಕ- ಉಡುಪಿ ಜಿಲ್ಲೆ ಇದರ ಬಂಟ್ವಾಳ ವಲಯದ ವಾರ್ಷಿಕ ಮಹಾಸಭೆಯು ಬಿ.ಸಿ.ರೋಡಿನ ಪ್ರೀತಿ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನುSKPA ಜಿಲ್ಲಾಧ್ಯಕ್ಷರಾದ ಶ್ರೀಧರ್ ಶೆಟ್ಟಿಗಾರ್ ನೆರವೇರಿಸಿದರು. ಅಧ್ಯಕ್ಷತೆಯನ್ನು ವಲಯದ ಅಧ್ಯಕ್ಷರಾದ ಕುಮಾರಸ್ವಾಮಿಯವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರೀಶ್ ಅಡ್ಯಾರ್, ಜಿಲ್ಲಾ ಕೋಶಾಧಿಕಾರಿ ಆನಂದ್ ಬಂಟ್ವಾಳ್, ಸಹಕಾರಿ ಸಂಘದ ನಿರ್ದೇಶಕರಾದ ಹರೀಶ್ ರಾವ್ ಬಂಟ್ವಾಳ, ಪ್ರಧಾನ ಕಾರ್ಯದರ್ಶಿ ವಿಕೇಶ್ ಬಂಟ್ವಾಳ, ಕೋಶಾಧಿಕಾರಿ ವಿಕ್ರಂ ಫರಂಗಿಪೇಟೆ ವೇದಿಕೆಯಲ್ಲಿ ಆಗಮಿಸಿದ್ದರು.
ಸಭೆಯಲ್ಲಿ 2021-2023ರ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು ಅಧ್ಯಕ್ಷರಾಗಿ ಹರೀಶ್ ಕುಂದರ್, ಪ್ರಧಾನ ಕಾರ್ಯದರ್ಶಿಯಾಗಿ ರವಿ ಕಲ್ಪನೆ, ಕೋಶಾಧಿಕಾರಿಯಾಗಿ ರೋಷನ್ ಕಲ್ಲಡ್ಕ , ಗೌರವಾಧ್ಯಕ್ಷರಾಗಿ ಕುಮಾರಸ್ವಾಮಿ, ಹರೀಶ್ ಮಾಣಿ, ಉಪಾಧ್ಯಕ್ಷರಾಗಿ ಮಹೇಶ್ ಶೆಟ್ಟಿ, ಬಾಲಕೃಷ್ಣ, ಜೊತೆ ಕಾರ್ಯದರ್ಶಿಯಾಗಿ ರಿಚಾರ್ಡ್, ಪ್ರವೀಣ್ ಚಂದ್ರ, ಸಂಘಟನೆ ಕಾರ್ಯದರ್ಶಿಯಾಗಿ ಹರೀಶ್ ನಾಟಿ, ಆನಂದ್ ಪೆರುವಾಯಿ, ಕ್ರೀಡಾ ಕಾರ್ಯದರ್ಶಿ ಯಾಗಿ ವಿವೇಕ್, ಪ್ರಶಾಂತ್, ಪತ್ರಿಕಾ ಪ್ರತಿನಿಧಿ ಯಾಗಿ ಲಕ್ಷ್ಮಣ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ರಾಮ್ ಇರಾ, ಬಿ.ಆರ್. ಕಬಕ ಆಯ್ಕೆಗೊಂಡರು.