ಪುತ್ತೂರು: ಜೆ.ಎಮ್.ಬಿಲ್ಡಿಂಗ್ ಎದುರು ಹಲವು ಸಮಯಗಳಿಂದ ಮುರಿದು ಬಿದ್ದಿರುವ ಫೂಟ್‌ಪಾತ್ ಸ್ಲ್ಯಾಬ್‌ಗೆ ಪಾದಚಾರಿಯೊಬ್ಬರು ಬಿದ್ದು ಕಾಲು ಮುರಿತಕೊಂಡ ಘಟನೆ ಸೆ.11 ರ ರಾತ್ರಿ ನಡೆದಿದೆ.
ಜೆ.ಎಮ್. ಬಿಲ್ಡಿಂಗ್ ಎದುರು ಕಳೆದ ಹಲವು ಸಮಯಗಳಿಂದ ಫೂಟ್‌ಪಾತ್ ಸ್ಲ್ಯಾಬ್‌ವೊಂದು ಮುರಿದು ಬಿದ್ದಿತ್ತು. ಹಗಲು ಹೊತ್ತು ಪಾದಚಾರಿಗಳಿಗೆ ಇದು ಗೋಚರವಾಗಿ ಅದನ್ನು ತಪ್ಪಿಸಿ ಹೋಗುತ್ತಾರೆ. ರಾತ್ರಿ ವೇಳೆ ಹೋಗುವ ಪಾದಚಾರಿಗಳಿಗೆ ಸ್ಲ್ಯಾಬ್ ಮುರಿದಿರುವುದು ಗಮನಕ್ಕೆ ಬಾರದೆ ಹಲವು ಮಂದಿ ಬಿದ್ದರಾದರೂ ಅಪಾಯದಿಂದ ತಪ್ಪಿಸಿಕೊಂಡಿದ್ದಾರೆ.
ಸೆ.11 ರಾತ್ರಿ ವ್ಯಕ್ತಿಯೊಬ್ಬರು ಮುರಿದ ಸ್ಲ್ಯಾಬ್‌ಗೆ ಬಿದ್ದು ಕಾಲು ಮುರಿತಗೊಂಡಿದ್ದಾರೆ. ಅವರು ಅಲ್ಲಿಂದ ಎದ್ದೆಳಲು ಸಾಧ್ಯವಾಗದೆ ಒದ್ದಾಡುತ್ತಿದ್ದರು. ರಾತ್ರಿ ಆದ್ದರಿಂದ ಆರಂಭದಲ್ಲಿ ಯಾರಿಗೂ ವ್ಯಕ್ತಿ ಬಿದ್ದಿರುವುದು ಗಮನಕ್ಕೆ ಬಂದಿಲ್ಲವಾಗಿತ್ತು. ಬಳಿಕ ಸ್ಥಳೀಯರಾದ ಹ್ಯಾರೀಸ್ ಮತ್ತಿತರ ಗಮನಕ್ಕೆ ಬಂದು ಸ್ಲ್ಯಾಬ್‌ನಲ್ಲಿ ಸಿಲುಕಿಕೊಂಡ ವ್ಯಕ್ತಿಯನ್ನು ಮೇಲೆತ್ತಿ ಬಳಿಕ ಆತನನ್ನು ಆಟೋ ರಿಕ್ಷಾದಲ್ಲಿ ಪುತ್ತೂರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ.