ಸುರತ್ಕಲ್: ಕಾಟಿಪಳ್ಳ ಸಮೀಪದ ಪೆಲತ್ತೂರುವಿನಲ್ಲಿ ಅಪ್ರಾಪ್ತ ಬಾಲಕನನ್ನು ಅಪಹರಿಸಿ ಮೊಬೈಲ್ ಹಾಗೂ ಹಣ ದರೋಡೆ ಮಾಡಿ ಬೆದರಿಕೆ ಒಡ್ಡಿರುವ ಬಗ್ಗೆ ಸುರತ್ಕಲ್ ಪೊಲೀಸರು 2 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಕಾಟಿಪಳ್ಳ ನಿವಾಸಿಗಳಾದ ಅಭಿಷೇಕ್ ಶೆಟ್ಟಿ (24) ಮತ್ತು ಚೇತನ್ (23) ಬಂಧಿತರು.
ಪೆಲತ್ತೂರು ಬಳಿಯ ನಿರ್ಜನ ಪ್ರದೇಶದ ರಸ್ತೆಯಲ್ಲಿ ಬಾಲಕ ಗಾಯಗೊಂಡು ಬಿದ್ದಿದ್ದು, ಬಾಲಕ ಯುವಕರ ಬಳಿ ಸಹಾಯ ಕೇಳಿ ದ್ವಿಚಕ್ರ ವಾಹನ ಹತ್ತಿದ್ದು ಬಳಿಕ ಬಾಲಕನನ್ನು ಎಟಿಎಂಗೆ ಕರೆದೊಯ್ದು ಹಣ ಡ್ರಾ ಮಾಡಿ ಬಾರ್‌ಗೆ ಕರೆದೊಯ್ದು ಆತನ ಹಣದಲ್ಲೇ ಮದ್ಯ ಸೇವಿಸಿದ್ದಾರೆ. ಬಳಿಕ ಮೊಬೈಲ್ ದರೋಡೆ ಮಾಡಿ ಬೆದರಿಕೆ ಹಾಕಿ ಪರಾರಿಯಾಗಿದ್ದಾಗಿ ಆರೋಪಿಸಿ ಸುರತ್ಕಲ್ ಪೊಲೀಸರಿಗೆ ದೂರು ನೀಡಲಾಗಿದೆ.
