ವಿಟ್ಲ: ಲಾಕ್‌ಡೌನ್‌ನಿಂದಾಗಿ ಜನರು ಸಂಕಷ್ಟಕ್ಕೆ ಒಳಗಾಗಿದ್ದು, ದುಡಿಮೆಯಿಲ್ಲದೆ ಜನರು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದು, ಈ ನಿಟ್ಟಿನಲ್ಲಿ ಯಕ್ಷಗಾನ ಕಲಾವಿದರ ಕಷ್ಟಗಳನ್ನು ಅರಿತು ಯಕ್ಷಧ್ರುವ ಪಟ್ಲ ಫೌಂಡೇಶನ್(ರಿ) ಮಂಗಳೂರು ಇವರ ವತಿಯಿಂದ ಇಂದು ವಿಟ್ಲದಲ್ಲಿ ಕಲಾವಿದರಿಗೆ ಕಿಟ್ ವಿತರಣೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬಂಟ್ವಾಳ ಸರ್ಕಲ್ ಇನ್ಸ್ಪೆಕ್ಟರ್ ಟಿ.ಡಿ. ನಾಗರಾಜ್ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಪಟ್ಲ ಫೌಂಡೇಶನ್ ವಿಟ್ಲ ಘಟಕದ ಅಧ್ಯಕ್ಷರಾದ ರಾಧಕೃಷ್ಣ ಚೆಲಡ್ಕ, ಗೌರವಧ್ಯಕ್ಷರಾದ ಕೃಷ್ಣಯ್ಯ ಅರಮನೆ, ಪ್ರಧಾನ ಕಾರ್ಯದರ್ಶಿಯಾದ ಪೂವಪ್ಪ ಮಾಸ್ಟರ್, ಘಟಕದ ಮಾ ಪೋಷಕರಾದ ಮಾಧವ ಮಾವೆ,ಸದಸ್ಯರಾದ ಸಂಜೀವ ಪೂಜಾರಿ, ಕಲಾವಿದ ಸುಬ್ರಾಯ ಹೊಳ್ಳ ಹಾಗೂ ಘಟಕದ ಪದಾಧಿಕಾರಿಗಳು ಉಪಸ್ಧಿತರಿದ್ದರು.